Tuesday 18 October 2011

ಕಡ್ಲೆ ಬೇಳೆ ಹೋಳಿಗೆ



 Click here for English


ಬೇಕಾಗುವ ಸಾಮಗ್ರಿಗಳು :
  • ಕಡ್ಲೆ ಬೇಳೆ ೧ ಕಪ್ 
  • ಸಕ್ಕರೆ ೧ ಕಪ್ 
  • ಏಲಕ್ಕಿ ಪೌಡರ್ 1tsp
  • ಮೈದಾ ಹಿಟ್ಟು 1 ೧/೨  ಕಪ್  
  • ಅಕ್ಕಿ ಹಿಟ್ಟು ೧ಚಮಚ 
  • ರವೆ ೧ಚಮಚ 
  • ಅರಿಶಿನ ಚಿಟಿಕೆ 
  • ಉಪ್ಪು 
  • ಎಣ್ಣೆ
ಮಾಡುವ ವಿಧಾನ :
 ಕನಕ
  • ಮೈದಾ ಹಿಟ್ಟು ,ಅಕ್ಕಿ ಹಿಟ್ಟು ,ರವಾ,ಅರಿಶಿನ,ಎಣ್ಣೆಯನ್ನು ಹಾಕಿ,ನೀರನ್ನು ಸ್ವಲ್ಪ ಸ್ವಲ್ಪ ಬಳಸುತ್ತಾ,ಚಪಾತಿ ಹಿಟ್ಟಿನ ಹದಕ್ಕೆ ಕಲಸಿಟ್ಟುಕೊಳ್ಳಿ.(೨೦ ನಿಮಿಷ ಹಾಗೆ ಬಿಡಿ) 
  • ನಂತರ ಉಂಡೆಯನ್ನು ಕಟ್ಟಿಟ್ಟುಕೊಳ್ಳಿ.
ಹೂರಣ 
  • ಕಡಲೆ ಬೇಳೆಯನ್ನು ಬೇಯಿಸಿ,ಅದರಿಂದ ನೀರನ್ನು ಬೇರ್ಪಡಿಸಿ ,ಪುಡಿ ಮಾಡಿಟ್ಟುಕೊಳ್ಳಿ.
  • ಕಡ್ಲೆ ಪುಡಿಗೆ ಸಕ್ಕರೆ ಹಾಕಿ,ಚೆನ್ನಾಗಿ ಪಾಕ ಬರುವ ತನಕ ಕಾಯಿಸಿ.
  • ನಂತರ ಅದಕ್ಕೆ ಏಲಕ್ಕಿ ಪುಡಿಯನ್ನು ಹಾಕಿ ಬಿಸಿ ತಣಿಯುವ ತನಕ ಕಾದು,ನಿಂಬೆ ಆಕಾರದ ಉಂಡೆಯನ್ನು ಕಟ್ಟಿಟ್ಟುಕೊಳ್ಳಿ.

  • ನಂತರ ಕನಕದ ಉಂಡೆಯನ್ನು ತೆಗೆದುಕೊಂಡು ಲಟ್ಟಿಸಿ, ಅದರೊಳಗೆ ಹೂರಣದ ಉಂಡೆಯನ್ನು ತುಂಬಿ,ಅದನ್ನು ಚಪಾತಿಯಂತೆ ಲಟ್ಟಿಸಿ.(ಲಟ್ಟಿಸುವಾಗ,ಪ್ಲಾಸ್ಟಿಕ್ or ಬಾಳೆ ಎಲೆ,ಎಣ್ಣೆ  ಬಳಸಿ )
  •  ತವಾ ಬಿಸಿಯಾದ ನಂತರ, ಹೋಳಿಗೆಯನ್ನು ಎರಡೂ ಬದಿಗೂ ಚೆನ್ನಾಗಿ ಬೇಯಿಸಿ.


No comments:

Post a Comment