Monday 12 September 2011

ವಾತಂಗಿ ಸೊಪ್ಪಿನ ತಂಬ್ಳಿ


ತಯಾರಿಸಲು ಬೇಕಾಗುವ ಸಮಯ: 10-15 ನಿಮಿಷ

ಬೇಕಾಗುವ ಸಾಮಗ್ರಿಗಳು:


  • ವಾತಂಗಿ ಸೊಪ್ಪು 1ಕಪ್
  • ಕಾಯಿತುರಿ 1ಕಪ್
  • ಹಸಿ ಮೆಣಸು 1
  • ಉಪ್ಪು 3/4 ಚಮಚ
  • ಮಜ್ಜಿಗೆ 1ಕಪ್
  • ಎಣ್ಣೆ 1ಚಮಚ
  • ಒಣಮೆಣಸು 1
  • ಸಾಸಿವೆಕಾಳು 1/2ಚಮಚ
ಮಾಡುವ ವಿಧಾನ:
  • ಹಸಿ ಮೆಣಸು,ವಾತಂಗಿ ಸೊಪ್ಪಿಗೆ ಸ್ವಲ್ಪ ಎಣ್ಣೆಯನ್ನು ಬೆರೆಸಿ ಹೊರೆದಿಟ್ಟುಕೊಳ್ಳಿ.
  • ಒಣಮೆಣಸು ಕತ್ತರಿಸಿಟ್ಟುಕೊಳ್ಳಿ.
  • ಕಾಯಿತುರಿ,ವಾತಂಗಿ ಸೊಪ್ಪು ಬೀಸಿಟ್ಟುಕೊಳ್ಳಿ.
  • ಬೀಸಿಟ್ಕಂಡ ಮಿಶ್ರಣಕ್ಕೆ,ಮಜ್ಜಿಗೆ,ಉಪ್ಪು,ನೀರು (ಬೇಕಾದರೆ)ಹಾಕಿ ಕರಡಿಟ್ಕಳಿ.
  • ಎಣ್ಣೆ,ಸಾಸಿವೆ,ಒಣಮೆಣಸಿನ ಒಗ್ಗರಣ್ಣೆ ಕೊಡಿ.
  • ವಾತಂಗಿ ಸೊಪ್ಪಿನ ತಂಬ್ಳಿ ಸವಿಯಲು ಸಿದ್ಧ.

2 comments:

  1. ಶಶಿರೇಖಾ ಅವರೇ ವಾತಂಗಿ ಸೊಪ್ಪಿಗೆ ಬೇರೆ ಭಾಷೆಗಳಲ್ಲಿ ಏನಂತಾರೆ??

    ReplyDelete
  2. ಗಣೇಶ ಭಟ್ಟ ಅಂತ ಹೇಳಿ ಈ ಪ್ರಶ್ನೆ ಕೇಳ್ತಿರೋದು

    ReplyDelete