ಬೇಕಾಗುವ ಸಾಮಗ್ರಿಗಳು:
- ದಾಸವಾಳದ ಎಲೆ 1ಕಪ್
- ಅಕ್ಕಿ 1ಕಪ್
- ಎಣ್ಣೆ (ಬೇಕಾದರೆ)
- ಉಪ್ಪು
- ಅಕ್ಕಿಯನ್ನು ನೀರಿನಲ್ಲಿ 4 ಗಂಟೆಗಳ ಕಾಲ ನೆನೆಸಿ.
- ಅಕ್ಕಿ ಮತ್ತು ದಾಸವಾಳದ ಎಲೆಯನ್ನು ರುಬ್ಬಿ.
- ಈ ಹಿಟ್ಟನ್ನು ರಾತ್ರೆ ಇಡೀ ಹಾಗೆ ಬಿಡಿ.
- ಉಪ್ಪು,ನೀರು ಹಾಕಿ ಕರಡಿ.
- ದೋಸೆ ಕಾವಲಿ ಬಿಸಿ ಬಂದ ನಂತರ ದೋಸೆ ಎರೆಯಿರಿ.(ದೋಸೆ ತೆಳ್ಳಗಿರಲಿ)
- ಈ ದೋಸೆ ಚಟ್ನಿ ಮತ್ತು ತಡುವೆ (ಜೇನು) ತುಪ್ಪದೊಂದಿಗೆ ಸವಿಯಲು ರುಚಿಯಾಗಿರುತ್ತದೆ.
No comments:
Post a Comment